ನಿನ್ನೊಲುಮೆ ನಮಗಿರಲಿ
ನಮ್ಮ ಮಕ್ಕಳು ಆರ್. ಎನ್. ಜಯಗೋಪಾಲ್
ನಿನ್ನೊಲುಮೆ ನಮಗಿರಲಿ ತಂದೆ
ಕೈಹಿಡಿದು ನೀ ನಡೆಸು ಮುಂದೆ || ಪ ||
ತಾನುರಿದು ಜಗಕೆಲ್ಲ ಜ್ಯೋತಿಯನು ನೀಡುವ
ದೀಪದೊಳು ನಿನೆಮ್ಮ ಅನುಗ್ರಹಿಸು ತಂದೆ
ಕಾನನದ ಸುಮವೊಂದು ಸೌರಭವ ತಾ ಸೂಸಿ
ಸಫಲತೆಯ ಪಡೆವಂತೆ ಮಾಡೆಮ್ಮ ತಂದೆ
ಸಿರಿಯು ಸಂಪದ ಬೇಡ, ಯಾವ ವೈಭವ ಬೇಡ
ನಿನ್ನ ಕರುಣೆಯೇ ಒಂದು ಸಾಕೆಮಗೆ ತಂದೆ || ೧ ||
ನಿನ್ನ ಈ ಮಕ್ಕಳನು ಪ್ರೇಮದಲಿ ನೀ ನೊಡು
ಈ ಮನೆಯು ಎಂದೆಂದು ನಗುವಂತೆ ಮಾಡು
ನಂಬಿದರೆ ಭಯವಿಲ್ಲ ನಂಬದಿರೆ ಬಾಳಿಲ್ಲ
ಅಂಬಿಗನೆ ನೀ ನಡೆಸು ಈ ಬಾಳ ನೌಕೆ
ಯಾವ ನೋವೇ ಬರಲಿ ಎದೆಗುಂದದಿರಲಿ
ಸತ್ಯ ಮಾರ್ಗದಿ ನಡೆವ ಶಕ್ತಿ ಕೊಡು ತಂದೆ || ೨ ||
ನಮ್ಮ ಮಕ್ಕಳು
ಚಿತ್ರ ನೋಡಿ